ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ ವಲಯದಲ್ಲಿನ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ಮತ್ತು ಭಾರತೀಯ ಯೋಧರ ನಡುವೆ ಎರಡು ಬಾರಿ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಗಳಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ ಯೋಧರ ಗುಂಡಿಗೆ ಮೂವರು ಉಗ್ರರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ನಿಯಂತ್ರಣ ರೇಖೆಯಿಂದ ದೇಶದೊಳಗೆ ನುಗ್ಗಲು ಉಗ್ರರು ರಾತ್ರಿಯಲ್ಲಾ ಪ್ರಯತ್ನ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗುಂಡಿನ ಚಕಮಕಿ ಬಗ್ಗೆ ವಿವರ ನೀಡಿದ ರಕ್ಷಣಾ ವಕ್ತಾರ ರಾಜೇಶ್ ಕಲಿಯಾ, ಭಾನುವಾರ ಮುಂಜಾನೆ 1 ಗಂಟೆಗೆ ಭದ್ರತಾ ಪಡೆಗಳು ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಚಲನೆಯನ್ನು ಗಮನಿಸಿವೆ. ಶರಣಾಗುವಂತೆ ಭದ್ರತಾ ಪಡೆಗಳು ಸೂಚಿಸಿದರೂ ಒಳನುಸುಳುಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಗುಂಡಿನ ಚಕಮಕಿ ನಡೆದು, ಘಟನೆಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿಸಿದ್ದಾರೆ.
ಹತನಾದ ಉಗ್ರನ ಬಳಿ ಇದ್ದ ಒಂದು ಎಕೆ ರೈಫಲ್ ಮತ್ತು ಎರಡು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ .ಗುಂಡಿನ ಚಕಮಕಿಯಲ್ಲಿ ಕಾನ್ಸ್ ಟೇಬಲ್ ಸುದೀಪ್ ಸರ್ಕಾರ್ ಹುತಾತ್ಮರಾಗಿದ್ದಾರೆ. ಮುಂದುವರೆದ ಗುಂಡಿನ ಚಕಮಕಿಯಲ್ಲಿ ಇನ್ನೂ ಇಬ್ಬರು ಹತರಾಗಿದ್ದಾರೆ. ಸೇನಾಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಕಲಿಯಾ ಹೇಳಿದ್ದಾರೆ.
3 infiltrators, 3 army jawans and a BSF trooper killed in an ongoing operation against infiltrators on LOC in Kupwara.
— IndiaToday (@IndiaToday) November 8, 2020
Watch @ashraf_wani's #ReporterDiary for more details #JammuAndKashmir #Kupwara
More Videos: https://t.co/FAHzdk9TO8 pic.twitter.com/exxZakKOVi
Comments
Post a Comment