ವೆಟ್ರಿವೆಲ್ ಯಾತ್ರೆಯನ್ನು ನಡೆಸಿಯೇ ಸಿದ್ಧ ಯಾವ ಬಂಧನಕ್ಕೂ ಹೆದರುವುದಿಲ್ಲ ಎಂದ ಅಣ್ಣಾಮಲೈ

 ತಮಿಳುನಾಡಿನ ತಿರುಟ್ಟಾನಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಬಿಜೆಪಿ ನಾಯಕ ಅಣ್ಣಾಮಲೈ ಅವರು ಹಿಂದುತ್ವದ ರಣಕಹಳೆ ಮೊಳಗಿಸಿದ್ದಾರೆ .ವೆಟ್ರಿವೆಲ್ ಯಾತ್ರೆ  ಮೇಲೆ ತಡೆ ಒಡ್ಡಿದ್ದ  ತಮಿಳ್ ನಾಡು  ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ವೆಟ್ರಿವೆಲ್ ಯಾತ್ರೆಯನ್ನು ನಡೆಸಲಾಗಿದೆ .ಈ ಯಾತ್ರೆಯಲ್ಲಿ ಅಣ್ಣಾಮಲೈ ಅವರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ .ಯಾತ್ರೆಯುದ್ದಕ್ಕೂ ಬಾರಿ ಜನ ಬೆಂಬಲ ದೊರೆತಿದೆ ,ತಿರುಟ್ಟಾನಿ ಮುರುಗನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ  ರಾಜ್ಯಾಧ್ಯಕ್ಷ ಮುರುಗನ್ ಅವರು  ಡಿಎಂಕೆ ನಾಯಕರು ದಶಕಗಳಿಂದ ಹಿಂದೂ ಭಾವನೆಗಳನ್ನು ಧಕ್ಕೆ ತರುತ್ತಿದ್ದಾರೆ. ಮಹಿಳೆಯರನ್ನು ಅವಮಾನಿಸಿದವರನ್ನು ಡಿಎಂಕೆ ಬೆಂಬಲಿಸಿದೆ ಎಂದು ಆರೋಪಿಸಿದರು. 


ಈ ವೇಳೆ ತಮಿಳ್ ನಾಡು ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಿರಿಯ ನಾಯಕ ಎಚ್.ರಾಜಾ, ಅಣ್ಣಾಮಲೈ  ಸೇರಿದಂತೆ  ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



Comments