ಅಪ್ಪನ ಬಿಡುಗಡೆಗಾಗಿ ತಲೆಯನ್ನು ಪೊಲೀಸ್ ಜೀಪಿಗೆ ಚಚ್ಚಿದ ಬಾಲಕಿ ವಿಡಿಯೋ ವೈರಲ್

 ಅಪ್ಪನಿಗಾಗಿ ಮಗಳು ನಡೆಸಿದ ಹೋರಾಟ, ಇದೀಗ ಉತ್ತರ ಪ್ರದೇಶದಲ್ಲಿ ಮನೆ ಮಾತಾಗಿದೆ..! ಇಲ್ಲಿನ ಬುಲಂದ್ ಶಹರ್‌ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಪಟಾಕಿ ಮಳಿಗೆ ಇಟ್ಟುಕೊಂಡಿದ್ದ. ದೀಪಾವಳಿ ವೇಳೆ ಅಕ್ರಮವಾಗಿ ಪಟಾಕಿ ಮಾರುವವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಸಮರವನ್ನೇ ಸಾರಿದ್ದಾರೆ. ಇದರ ಅಂಗವಾಗಿ ಬುಲಂದ್ ಶಹರ್‌ನಲ್ಲೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಈ ವೇಳೆ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಳಿಗೆಯನ್ನು ಮುಚ್ಚಿಸಿ, ಆರೋಪಿ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ತನ್ನ ತಂದೆಯ ನೆರವಿಗೆ ಧಾವಿಸಿದ ಬಾಲಕಿ ಪೊಲೀಸರ ಜೊತೆ ವಾಗ್ವಾದ ನಡೆಸಿದಳು. ಪೊಲೀಸ್ ಜೀಪ್‌ಗೆ ತಲೆ ಚಚ್ಚಿಕೊಂಡಳು. ತನ್ನ ತಂದೆಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದಳು. ಆದರೆ, ಪೊಲೀಸರು ಮಾತ್ರ ಬಾಲಕಿಯ ಬೇಡಿಕೆಗೆ ಸೊಪ್ಪು ಹಾಕಲೇ ಇಲ್ಲ.

ಬಾಲಕಿ ಪೊಲೀಸರ ಜೊತೆ ವಾಗ್ವಾದ ನಡೆಸುವ ಸನ್ನಿವೇಶವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಣ ಮಾಡಿ ಆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಈ ವಿಡಿಯೋ ವೈರಲ್ ಆಗಿದ್ದೇ ತಡ, ಉತ್ತರ ಪ್ರದೇಶ ಪೊಲೀಸರ ಮೇಲೆ ಸಿಎಂ ಯೋಗಿ ಆದಿತ್ಯನಾಥ್ ಕೆಂಗಣ್ಣು ಬೀರಿದರು. ಏಕೆಂದರೆ, ಈ ದೃಶ್ಯಾವಳಿ ಸಿಎಂ ಕಚೇರಿ ತಲುಪಿತ್ತು.

ಕೂಡಲೇ ಎಚ್ಚೆತ್ತ ಪೊಲೀಸರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದರು. ಬಾಲಕಿ ತಂದೆಯನ್ನು ಮನೆಗೆ ಕಳಿಸಿದರು. ಪೊಲೀಸರೂ ಕೂಡಾ ಬಾಲಕಿಯ ಮನೆಗೆ ಹೋಗಿ ಆಕೆಗೆ ಸಾಂತ್ವನ ಹೇಳಿ ದೀಪಾವಳಿಯ ಸಿಹಿ ತಿನ್ನಿಸಿ ಶುಭ ಕೋರಿದರು. ಇದೀಗ ಬಾಲಕಿಗೆ ಪೊಲೀಸರು ಸಾಂತ್ವನ ಹೇಳಿದ ದೃಶ್ಯ ಭಾರೀ ವೈರಲ್ ಆಗಿದೆ.ವಿಡಿಯೋ ನೋಡಿ 

Comments