ದೆಹಲಿಯಲ್ಲಿ ಸತತ ಹಲವು ದಿನಗಳಿಂದ ಸಿಂಘು ಗಡಿಯಲ್ಲಿ ರೈತರು ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ, ಕೃಷಿ ಕಾನೂನುಗಳನ್ನು ಬೆಂಬಲಿಸಿ ಪಶ್ಚಿಮ ಉತ್ತರ ಪ್ರದೇಶದ ರೈತ ಒಕ್ಕೂಟ ಕಿಸಾನ್ ಸೇನೆಯ ಸುಮಾರು 20,000 ಸದಸ್ಯರು ಗುರುವಾರ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಮಥುರಾ, ಆಗ್ರಾ, ಫಿರೋಜಾಬಾದ್, ಹತ್ರಾಸ್ ಮುಂತಾದ ಜಿಲ್ಲೆಗಳನ್ನು ಒಳಗೊಂಡಿರುವ ಬ್ರಜ್ ಪ್ರದೇಶದ ರೈತರು ಈ ಮೆರವಣಿಗೆಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ ಮತ್ತು ಪಶ್ಚಿಮ ಯುಪಿಯ ಮೀರತ್ ಮತ್ತು ಮುಜಫರ್ ನಗರದ ಬೆಂಬಲಿಗರು ಕೂಡ ಸೇರಲಿದ್ದಾರೆ ಎಂದು ಯೂನಿಯನ್ ಹೇಳಿದೆ.
ದೆಹಲಿಗೆ ನಮ್ಮ ಮೆರವಣಿಗೆಗೆ ಸಂಬಂಧಿಸಿದಂತೆ ನಾವು ಅನುಮತಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಆದರೆ ಉತ್ತರ ಸಿಕ್ಕಿಲ್ಲ. ಏನೇ ಇರಲಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿ ಮಾಡಲು ಕಿಸಾನ್ ಸೇನಾ ಬೆಂಬಲಿಗರಲ್ಲಿ ಸುಮಾರು 20,000 ಮಂದಿ ದೆಹಲಿಗೆ ತೆರಳಲಿದ್ದಾರೆ” ಎಂದು ಕಿಸಾನ್ ಸೇನಾ ಮುಖಂಡ ಠಾಕೂರ್ ಗೌರಿ ಶಂಕರ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Comments
Post a Comment