ಪಾದರಾಯನಪುರ ವಾರ್ಡ್ ರಸ್ತೆಗಳಿಗೆಲ್ಲಾ ಮುಸ್ಲಿಂ ವ್ಯಕ್ತಿಗಳ ಹೆಸರು! ಬಿಬಿಎಂಪಿ ನಿರ್ಧಾರಕ್ಕೆ ತಡೆನೀಡಿದ ಯಡಿಯೂರಪ್ಪ ಸರಕಾರ!

 ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಪಾದರಾಯನಪುರದ ರಸ್ತೆಗಳಿಗೆಲ್ಲಾ ಮುಸ್ಲಿಂ ನಾಯಕರ ಹೆಸರಿಡಲು ಮುಂದಾಗಿರುವ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಿಬಿಎಂಪಿಯ ನಿರ್ಧಾರಕ್ಕೆ ರೆಡ್ ಸಿಗ್ನಲ್ ನೀಡಿದೆ. ಈ ನಡುವೆ ಯಡಿಯೂರಪ್ಪ ಸರಕಾರದ ವಿರುದ್ಧ ಕೆಲವರು ವಿವಾದಾಸ್ಪದ ನಿರ್ಧಾರದ ಹಿಂದಿನ ವಿಚಾರಗಳನ್ನು ಪರಾಮರ್ಶಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತಂತೆ ನಮ್ಮ ತಂಡ ಈ ನಿರ್ಧಾರದ ಹಿಂದೆ ಯಡಿಯೂರಪ್ಪ ಸರಕಾರ ಇದೆಯೇ ಎಂದು ಅಧ್ಯಯನ ನಡೆಸಿದಾಗ ನಮಗೆ ಸಿಕ್ಕ ಉತ್ತರ "ಇಲ್ಲ!". ಹಾಗಾದರೆ ಈ ನಿರ್ಧಾರದ ಹಿಂದೆ ಇರೋರು ಯಾರು ಅಂತ ನೋಡಿದಾಗ ಕಂಡು ಬಂದ ಹೆಸರು ಬೆಂಗಳೂರಿನ ಬಿಜೆಪಿ ನಾಯಕರೂ ಹಾಗೂ ಕಾರ್ಪೊರೇಟರ್ ರಾದಂತಹ ಮುನೀಂದ್ರ ಕುಮಾರ್ ಹಾಗೂ ಮಾಜಿ ಮೇಯರ್ ಗೌತಮ್ ಜೈನ್! ತಾವು ಮೇಯರ್ ಆಗಿದ್ದ ಸಮಯದಲ್ಲಿ ಗೌತಮ್ ಜೈನ್ ಅವರು ಮುನೀಂದ್ರ ಕುಮಾರ್ ರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು,  ಈ ಕಡತ ಪ್ರೊಟೊಕಾಲ್ ಪ್ರಕಾರ ಸಂಬಂಧಪಟ್ಟ ಇಲಾಖೆಗೆ ಹೋಗಿ ಕೆಲ ತಿಂಗಳುಗಳ ಬಳಿಕ ನಿನ್ನೆಯಷ್ಟೇ ಬಿಬಿಎಂಪಿ ಅನುಮೋಧನೆ ನೀಡಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸರಕಾರದ ಗಮನಕ್ಕೆ ಬರುತ್ತಿದ್ದಂತೆ ಬಿಬಿಎಂಪಿಯ ವಿವಾದಾತ್ಮಕ ನಿರ್ಧಾರಕ್ಕೆ ಬ್ರೇಕ್ ಬಿದ್ದಿದೆ.

ಸಂಘಪರಿವಾರದ ಹಿರಿಯ ನಾಯಕರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗೌತಮ್ ಜೈನ್ ಯಾಕೆ ಈ ನಿರ್ಧಾರ ಕೈಗೊಂಡಿದ್ದರು ಎನ್ನುವ ಕುರಿತು ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದ್ದು, ಸಂಘಪರಿವಾರ ಅಲ್ಪಸಂಖ್ಯಾತ ಜೈನ್ ಸಮುದಾಯದಿಂದ ಬಂದಿರತಕ್ಕಂತಹ ಗೌತಮ್ ಜೈನ್ ರನ್ನು ಮೇಯರ್ ಅನ್ನಾಗಿ ಮಾಡಿದ್ದರೂ ಸಹ ಅವರು ಏತಕ್ಕಾಗಿ ಕೇವಲ ಮುಸಲ್ಮಾನರ ಹೆಸರನ್ನು ಪಾದರಾಯನಪುರ ರಸ್ತೆಗಳಿಗೆ ಇಡುವಂತಹ ವಿವಾದಾಸ್ಪದ ನಿರ್ಧಾರ ಕೈಗೊಂಡಿದ್ದರು ಎನ್ನುವ ಬಗ್ಗೆ ಅವರೇ ಸ್ಪಷ್ಠಿಕರಣ ನೀಡಬೇಕಿದೆ. ಒಟ್ಟಾರೆ ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಹಲವಾರು ಕಾರ್ಯಕರ್ತರು ಬಿ.ಎಸ್.ಯಡಿಯೂರಪ್ಪ ಸರಕಾರಕ್ಕೆ ಬಿಬಿಎಂಪಿಯ ನಿರ್ಧಾರಕ್ಕೆ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಕೂಡಲೇ ಸ್ಪಂದಿಸಿದ ಯಡಿಯೂರಪ್ಪ ಸರಕಾರದ ನಡೆ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.


Comments