ಪುಲ್ವಾಮ ಜಿಲ್ಲೆಯ ಟಿಕನ್ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಹತರಾದ ಮೂವರು ಉಗ್ರರು

 ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟಿಕನ್ ಪ್ರದೇಶದಲ್ಲಿ ಬುಧವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಅಲ್ ಬದ್ರೆ ಎಂಬ ಸ್ಥಳೀಯ ಭಯೋತ್ಪಾದಕ ಗುಂಪಿನ ಮೂವರು ಉಗ್ರಗಾಮಿಗಳು ಹತರಾಗಿದ್ದಾರೆ.ಪುಲ್ವಾಮ ಜಿಲ್ಲೆಯ ಟಿಕನ್ ಪ್ರದೇಶದಲ್ಲಿ ಇಂದು ನಸುಕಿನ ಜಾವ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು.ಇದರಲ್ಲಿ ಸ್ಥಳೀಯ ನಾಗರಿಕರೊಬ್ಬರಿಗೆ ಗಾಯವಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.ಸೇನಾ ಕಾರ್ಯಾಚರಣೆಯ ವಿಡಿಯೋ ನೋಡಿ 

Comments