ವಿಜಯಪುರದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದ ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಹೋರಾಟಗಾರ ವಾಟಾಳ್ ನಾಗರಾಜ್, ಯಡಿಯೂರಪ್ಪರದ್ದು ಗೂಂಡಾ ಸರ್ಕಾರ, ನಮಗೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕಿತ್ತು. 60 ಕಿ.ಮೀ ದೂರದಲ್ಲೆ ತಡೆದಿದ್ದಾರೆ, ನನ್ನ ಜೀವಮಾನದಲ್ಲೆ ಇಷ್ಟು ದೂರ ಬಂಧಿಸಿದ್ದನ್ನು ಕಂಡಿಲ್ಲ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಯತ್ನಾಳ್‌ರಂಥ ಅದೆಷ್ಟೋ ಮಂದಿಯನ್ನು ನೋಡಿದ್ದೇನೆ ಎಂದು ಟಾಂಗ್ ನೀಡಿದ ವಾಟಾಳ್, ಯಡಿಯೂರಪ್ಪ ಸಿಎಂ ಆದ ಮೇಲೆ ನನಗೆ ನೀಡಿದ ಎಸ್ಕಾರ್ಟ್ ಹಿಂಪಡೆದಿದ್ದಾರೆ. ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಬಹಳ ಸಿಟ್ಟಿದೆ. ನನ್ನ ಮೇಲಿನ ಸಿಟ್ಟಿನಿಂದ ಹೀಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
Comments
Post a Comment