ಜಮ್ಮು ಕಾಶ್ಮೀರ ಎನ್ಕೌಂಟರ್ ನಲ್ಲಿ ಹತ್ಯೆಗೊಂಡ ಯುವಕನ ಶವ ನೀಡದ ಭದ್ರತಾ ಪಡೆಗಳ ವಿರುದ್ಧ ಹೆತ್ತವರ ಆಕ್ರೋಶ

 ಜಮ್ಮು-ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ  ನಡೆದ ಎನ್​ಕೌಂಟರ್​ನಲ್ಲಿ ಸ್ಥಳೀಯ ಯುವ ಉಗ್ರ . ಅಥರ್ ಮುಷ್ತಾಕ್  ಮೃತಪಟ್ಟಿದ್ದ ಈ ಎನ್ಕೌಂಟರ್ ನಕಲಿ ಎಂದು ಮನೆಯವರು ಆರೋಪಿಸಿದ್ದಾರೆ.,ಇನ್ನು ಸೇನಾ ಪಡೆಗಳು ನೀಡಿದ ಸ್ಪಷ್ಟಿಕರಣದಲ್ಲಿ ಅಥರ್ ಹಾಗೂ ಆತನ ಸಹಚರರು   ಶ್ರೀನಗರ-ಬಾರಾಮುಲ್ಲ ಹೆದ್ದಾರಿಯಲ್ಲಿ ದೊಡ್ಡಮಟ್ಟದ ಉಗ್ರರ ದಾಳಿ ನಡೆಸಲು ಸಂಚು ರೂಪಿಸಿದ್ದರು.ಈ ಮಾಹಿತಿಯನ್ನು ಪಡೆದು ಭದ್ರತಾ ಪಡೆಗಳು ಸೇನಾ ಕಾರ್ಯಾಚರಣೆ ನಡೆಸಿ ಮೊದಲು ಉಗ್ರರನ್ನು ಶರಣಾಗಲು ತಿಳಿಸಿದ್ದರು , ನಿರಾಕರಿಸಿದ ಉಗ್ರರು ಗುಂಡಿನ ದಾಳಿ ನಡೆಸಿದಾಗ ಉಗ್ರರನ್ನು ಹೊಡೆದುರುಳುಸಿದ್ದಾರೆ .ಸ್ಥಳದಿಂದ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶ ಪಡೆಯಲಾಗಿತ್ತು. 

ಇನ್ನು ಈ ಘಟನೆ ನಡೆದು ನಾಲ್ಕು ದಿನಗಳ ನಂತರವೂ ಮಗನ ಶವ ಸಿಗುವ ಭರವಸೆಯಲ್ಲಿರುವ ತಂದೆ, ಶವ ಹೂಳಲು ಗುಂಡಿ ತೋಡಿದ್ದಾರೆ.ಇನ್ನು, ಭದ್ರತಾ ಸಿಬ್ಬಂದಿ ಈಗಾಗಲೇ ಅಥರ್ ಮುಷ್ತಾಕ್ ಹೆಣವನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯದಿ ದ್ದಾರೆ ಮತ್ತು ಮನೆಯವರಿಗೆ ಶವ ನೀಡಲು ನಿರಾಕರಿಸಲಾಗಿದೆ.ಈ ಮಧ್ಯೆಯೂ ಅಥರ್ ಮುಷ್ತಾಕ್ ಕುಟುಂಬ ಮಗನ ಶವ ಸಿಗುವ ಭರವಸೆಯಲ್ಲಿದೆ. ಇದಕ್ಕಾಗಿ ಮನೆಯ ಸಮೀಪವೇ ಗುಂಡಿಯೊಂದನ್ನು ತೋಡಿದೆ.ಸೋನ್​ಮಾರ್ಗ್​​ನಲ್ಲಿ ನಡೆದ ಈ ಎನ್​ಕೌಂಟರ್​ ಅನ್ನು ಭದ್ರತಾ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಮುಗ್ಧರನ್ನು ಗುಂಡಿಟ್ಟುಕೊಂದಿದೆ ಎಂದು ಹಲವು  ಪ್ರತ್ಯೇಕವಾದಿ ಬೆಂಬಲಿಗರು ಆರೋಪಿಸಿದ್ದಾರೆ.

Comments