ರೈತರ ಪ್ರತಿಭಟನೆ ಹೈಜಾಕ್ ಪೊಲೀಸರ ಮೇಲೆ ತಲ್ವಾರ್ ಬೀಸಿದ ವಿಡಿಯೋ ವೈರಲ್

ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತರು 61 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಜ.26 ರಂದು ತೀವ್ರ ಸ್ವರೂಪ ಪಡೆದುಕೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ. ಜ.26 ರಂದು ಶಾಂತಿಯುತವಾಗಿ ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದು ಹೇಳಿದ್ದ ರೈತರ ಪ್ರತಿಭಟನಾ ಮೆರವಣಿಗೆಯಲ್ಲಿ ಕಿಡಿಗೇಡಿಗಳು ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪಥ ಬದಲಿಸಿದ ಟ್ರ್ಯಾಕ್ಟರ್ ಗಳು ಪೊಲೀಸರತ್ತ ನುಗ್ಗಿ ಬಂದವು. ಅಷ್ಟೇ ಅಲ್ಲದೇ ಪ್ರತಿಭಟನೆಯನ್ನು ಹೈಜಾಕ್ ಮಾಡಿದ ಕೆಲವು ಕಿಡಿಗೇಡಿಗಳು ಪೊಲೀಸರತ್ತ ತಲ್ವಾರ್ ಬೀಸಿ ಹಿಂಸಾಚಾರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ರೈತರ ಸೋಗಿನಲ್ಲಿ ಪೊಲೀಸರ ಮೇಲೆ ತಲ್ವಾರ್ ಬೀಸಿರುವ ವಿಡಿಯೋಗಳು ವೈರಲ್ ಆಗತೊಡಗಿವೆ

Comments