ಆರು ದೇಶಗಳಿಗೆ ಕೊವಿಶೀಲ್ಡ್‌ ರಫ್ತು ಮಾಡಿ ,ಭೂತಾನ್‌ಗೆ 1.5 ಲಕ್ಷ ಡೋಸ್‌ ಉಚಿತವಾಗಿ ನೀಡಿದ ಭಾರತ

ಮಹಾ ಮಾರಿ ಕೊರೋನಾ ವಿರುದ್ಧ ತೊಡೆ ತಟ್ಟಿ ಸ್ವಯಂ ಕೊರೊನಾ ಲಸಿಕೆ ತಯಾರಿಸಿ ವಿಶ್ವ ರಾಷ್ಟ್ರಗಳಿಗೆ ಸವಾಲೆಸೆಸಿದ್ದ ಭಾರತ ಇದೀಗ, ತನ್ನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸಿ, ವಿದೇಶಕ್ಕೂ ರಫ್ತು ಮಾಡಿದೆ. ಭೂತಾನ್‌ಗೆ ಕೊವಿಶೀಲ್ಡ್‌ ಲಸಿಕೆಯನ್ನು ಬುಧವಾರ ರಫ್ತು ಮಾಡಿದೆ. ಒಟ್ಟು ಆರು ದೇಶಗಳಿಗೆ ಭಾರತ ಲಸಿಕೆ ರಫ್ತು ಮಾಡಲಿದೆ.

ಬುಧವಾರ ಒಂದೂವರೆ ಲಕ್ಷೆ ಡೋಸ್‌ಗಳಿರುವ ಕೊವಿಶೀಲ್ಡ್‌ ಸರಕನ್ನು ಹೊತ್ತು ಮುಂಬೈನ ಛತ್ರಪತಿ ಮಹರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿರುವ ವಿಮಾನ, ಮಧ್ಯಾಹ್ನದ ವೇಳೆಗೆ ಭೂತಾನ್‌ ರಾಜಧಾನಿ ಥಿಂಪು ನಗರಕ್ಕೆ ತಲುಪಿದೆ.

ಪುಣೆಯ ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಲಸಿಕೆ ದೇಶದ ವಿವಿಧ ಭಾಗಗಳ, ಮಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲಾಗಿತ್ತು. ಇದೀಗ ಭೂತಾನ್‌ಗೂ ಕಳುಹಿಸಲಾಗತ್ತು. ಉಭಯ ರಾಷ್ಟ್ರಗಳ ಸ್ನೇಹ ಸಂಬಂಧ ನಿಮಿತ್ತ ಈ ಲಸಿಕೆಗಳನ್ನು ಉಚಿತವಾಗಿ ಕಳುಹಿಸಿ ಕೊಡಲಾಗಿದೆ.

ಭಾರತ ತನ್ನ ದೀರ್ಘ ಕಾಲಿನ ವಿಶ್ವಸನೀಯ ರಾಷ್ಟ್ರಗಳಿಗೆ ಆರೋಗ್ಯ ಸಂಬಂಧ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ. ಹಲವು ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ ನಾಳೆಯಿಂದ ಆರಂಭವಾಗಲಿದೆ. ಭವಿಷ್ಯದಲ್ಲಿ ಇನ್ನಷ್ಟು ರಾಷ್ಟ್ರಗಳಿಗೆ ನೆರವು ನೀಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

ದೇಶಾದ್ಯಂತ ಕೊರೊನಾ ಮಹಾಮಾರಿ ವಕ್ಕರಿಸಿದ ವೇಳೆ, ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್‌ ಕೂಡ ತಯಾರಾಗುತ್ತಿರಲಿಲ್ಲ. ಬಳಿಕ ಕ್ಷಿಪ್ರವಾಗಿ ಪಿಪಿಇ ಕಿಟ್‌ಗಳ ತಯಾರಿಸಲು ಪ್ರಾರಂಭಿಸಿದ ಭಾರತ, ಹಲವು ರಾಷ್ಟ್ರಗಳಿಗೆ ಉದಾರವಾಗಿ ನೀಡಿತ್ತು.

PP ಕಿಟ್‌, ಮಾಸ್ಕ್‌, ಎಕ್ಸ್‌ರೇ ಯಂತ್ರ, ಮಾತ್ರೆಗಳು, ಔ‍ಷಧಗಳು ಸೇರಿ ಹಲವು ವೈದ್ಯಕೀಯ ಸಲಕರಣೆಗಳನ್ನು ವಿಶ್ವದ ಹಲವು ರಾಷ್ಟ್ರಗಳಿಗೆ ಉಚಿತವಾಗಿ ನೀಡಿತ್ತು. ಭಾರತದ ಈ ನಡೆ ಭಾರೀ ಪ್ರಶಂಸೆಗೆ ಕಾರಣವಾಗಿತ್ತು.

ಏತನ್ಮಧ್ಯೆ ಭಾರತ ಸ್ವ ಸಾಮರ್ಥ್ಯದಿಂದಲೇ ಕೊರೊನಾಗೆ ಲಸಿಕೆ ಅಭಿವೃದ್ಧಿ ಪಡಿಸಿ ರಫ್ತು ಮಾಡಲು ಶುರು ಮಾಡಿದೆ. ಈಗಾಗಲೇ ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್‌, ಭೂತಾನ್‌ ಹಾಗೂ ಮಾಲ್ಡೀವ್ಸ್‌ನಿಂದ ಲಸಿಕೆಗೆ ಬೇಡಿಕೆ ಬಂದಿದೆ ಎಂದು ಸರ್ಕಾರ ಹೇಳಿದೆ.



Comments