ಮಹಾರಾಷ್ಟ್ರದ ದಹಿಸರ್ ರೈಲು ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಪ್ರಯಾಣಿಕರೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರೈಲು ಹಳಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಚಪ್ಪಲಿ ಬಿಡಿಸಿಕೊಂಡು ಫ್ಲಾಟ್ ಫಾರಂ ಕಡೆಗೆ ಪ್ರಯಾಣಿಕ ಬರುತ್ತಿದ್ದಾಗ ರೈಲು ಬಂದೇ ಬಿಟ್ಟಿದೆ. ಇನ್ನೇನು ರೈಲು ಡಿಕ್ಕಿಯಾಯಿತು ಅನ್ನುವಷ್ಟರಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ನೆರವಾಗಿದ್ದಾರೆ. ಫ್ಲಾಟ್ ಫಾರಂನಿಂದ ಓಡೋಡಿ ಬಂದ ಪೊಲೀಸ್, ಪ್ರಯಾಣಿಕನನ್ನು ರಕ್ಷಿಸಿದ್ದಾರೆ.ಘಟನೆ ಸಂಬಂಧಿಸಿ ವಿಡಿಯೋ ನೋಡಿ
Comments
Post a Comment