ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ಖಾಸಗಿ ರೆಸಾರ್ಟ್ ಸಮೀಪ ದಾರಿ ತಪ್ಪಿದ ಕಾಡು ಆನೆಯ ಮೇಲೆ ಪ್ಲಾಸ್ಟಿಕ್ ಮಾದರಿ ಸುಡುವ ವಸ್ತುವನ್ನು ಎಸೆದು ಕ್ರೌರ್ಯ ಮೆರೆಯಲಾಗಿದೆ . ಘಟನೆ ಸಂಬಂಧಿಸಿ ವಿಡಿಯೋವನ್ನು ಜನವರಿ 22 ರಂದು ಅರಣ್ಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಕಿವಿಯೊಂದಕ್ಕೆ ಗಂಭೀರ ಗಾಯಗಳಾಗಿರುವ ಆನೆ ಒಂದೆರಡು ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,ಬಂಧಿತರನ್ನು ರೈಮಾನ್ ಮತ್ತು ಪ್ರಶಾಂತ್ ಎಂದು ಗುರುತಿಸಲಾಗಿದೆ .
ಆನೆಯ ಖಾಸಗಿ ರೆಸಾರ್ಟ್ ಹತ್ತಿರ ಸುಳಿದಾಡಿದ ಮಾಹಿತಿ ಪಡೆದು ದುರುಳರು ಉರಿಯುತ್ತಿರುವ ಟೈರ್ ಮಾದರಿ ವಸ್ತುವನ್ನು ಆನೆ ಮೇಲೆ ಎಸೆದಿದ್ದಾರೆ . ಬೆಂಕಿಯ ಜ್ವಾಲೆಯಲ್ಲಿ ಆನೆ ಚೀರಾಡುತ್ತಾ ಹತ್ತಿರ ಇರುವ ಅಣೆಕಟ್ಟು ಬಳಿ ಓದಿ ಹೋಗಿ ಬಿದ್ದಿದೆ. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಪಶುವೈದ್ಯರು ಅದನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು, ಆದರೆ ವ್ಯರ್ಥವಾಯಿತು. ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಎಂದು ತಿಳಿದು ಬಂದಿದೆ.ಘಟನೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ,ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯನ್ನು ಆಗ್ರಹಿಸಲಾಗಿದೆ .

Comments
Post a Comment