ಹಿಂದೂಗಳ ಒಗ್ಗಟ್ಟಿನ ಫಲ 24ಗಂಟೆಯಲ್ಲಿ ರಿಂಕು ಶರ್ಮ ಕುಟುಂಬಕ್ಕೆ ಯಾವ ರೀತಿ ನೆರವಿನ ಮಹಾಪೂರ ಹರಿದು ಬಂದಿದೆ ನೋಡಿ

 ದೆಹಲಿಯ ಹಿಂದೂ ಸಂಘಟನೆ ಕಾರ್ಯಕರ್ತ ರಿಂಕು ಶರ್ಮ ಹತ್ಯೆಗೆ ಸಂಬಂಧಪಟ್ಟಂತೆ ದೇಶದೆಲ್ಲೆಡೆ ಆಕ್ರೋಶ ಮುಗಿಲು ಮುಟ್ಟಿದೆ .  ಕೋಮು ದ್ವೇಷದ ಹಿನ್ನೆಲೆಯಲ್ಲಿ ರಿಂಕು ಶರ್ಮ ನನ್ನು ಹತ್ಯೆ ಮಾಡಲಾಗಿದೆ ಎಂದು ಆತನ ತಾಯಿ ಹೇಳಿಕೆ ನೀಡಿ ತನ್ನ ಆಕ್ರಂದನವನ್ನು ಮಾಧ್ಯಮದ ಮುಂದೆ ತಿಳಿಸಿದ್ದಾರೆ .ದುಃಖತಪ್ತ ಕುಟುಂಬಕ್ಕೆ ಸಮಸ್ತ ಹಿಂದುಗಳು ಆರ್ಥಿಕವಾಗಿ ನೆರವನ್ನು ನೀಡುವ ಸಂಕಲ್ಪ ಮಾಡಿದ್ದಾರೆ .ದೆಹಲಿ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ನೇತೃತ್ವದಲ್ಲಿ ಈ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವಂತೆ ಹಿಂದೂಗಳಲ್ಲಿ ಸಹಾಯ ಹಸ್ತ ಚಾಚಲು ಕೋರಲಾಗಿತ್ತು .

ಈ ಕೋರಿಕೆಯ  24ಗಂಟೆಯಲ್ಲಿ ಇದೀಗ ಐವತ್ತು 50ಲಕ್ಷ ಕುಟುಂಬಸ್ಥರ ಖಾತೆಗೆ ಹರಿದು ಬಂದಿದೆ . ಸೋಮವಾರದವರೆಗೆ 1ಕೋಟಿಯಷ್ಟು ಆರ್ಥಿಕವಾಗಿ ಸಹಾಯ ಮಾಡಿ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವುದಾಗಿ ಕಪಿಲ್ ಮಿಶ್ರಾ ತಿಳಿಸಿದ್ದಾರೆ .ದೆಹಲಿ ಸರ್ಕಾರ ಪ್ರಕರಣದ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿದೆ ಹಿಂದೂಗಳು ಮಾತ್ರ ಒಗ್ಗೂಡಿ ನಾವು ರಿಂಕು ಶರ್ಮ ಕುಟುಂಬದ ಜೊತೆ ಇದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Comments