ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ ಇಬ್ಬರು ಪಾಕ್ ಎಜೆಂಟ್ ಗಳನ್ನು ಬಂಧಿಸಿದ ಉತ್ತರ ಪ್ರದೇಶ ಎಟಿಎಸ್

ಉತ್ತರ ಪ್ರದೇಶದ ದೆಹಲಿ ಸೇರಿದಂತೆ ದೇಶದ ಹಲವೆಡೆ ಕಿವುಡ, ಮೂಕ ಮಕ್ಕಳನ್ನು ಅಸಾಹಾಯಕರನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಇಬ್ಬರನ್ನು ಉತ್ತರ ಪ್ರದೇಶ ಎಟಿಎಸ್ ಬಂಧಿಸಿದೆ. ಬಂಧಿತ ಇಬ್ಬರು ಪಾಕಿಸ್ತಾನ ಐಎಸೈ ಎಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಅನ್ನೋದು ವಿಚಾರಣೆಯಿಂದ ಬಹಿರಂಗವಾಗಿದೆ.

ಬಂಧಿತರನ್ನು ಜಂಹಗೀರ್ ಹಾಗೂ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಉಮರ್ ಗೌತಮ್ ಬಾಟ್ಲಾ ಹೌಸ್ ಜಾಮಿಯಾ ನಗರ ನಿವಾಸಿಯಾಗಿದ್ದು ಈಗಾಗಲೇ 1,000 ಹೆಚ್ಚು ಮಂದಿಯನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರಿಸಿದ್ದಾನೆ. ವಿಚಾರಣೆ ವೇಳೆ ಈತ ಪಾಕಿಸ್ತಾನ ISI ನಿರ್ದೇಶನದ ಮೇರೆಗೆ ಭಾರತದಲ್ಲಿ ಮತಾಂತರ ಮಾಡುತ್ತಿದ್ದ ಅನ್ನೋದು ಬಯಲಾಗಿದೆ.

ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಈ ಇಬ್ಬರು, ಭಾರತದ ಹಲವು ಮಾಹಿತಿಗಳನ್ನು ಪಾಕಿಸ್ತಾನ ISIಗೆ ರವಾನೆ ಮಾಡುತ್ತಿದ್ದ ಆರೋಪವೂ ಇದೆ. ಜಗತ್ತಿನಲ್ಲಿ ಇಸ್ಲಾಂ ಮಾತ್ರ ಅತ್ಯಂತ ಶ್ರೇಷ್ಠ ಧರ್ಮ. ಇಸ್ಲಾಂಗೆ ಮತಾಂತರಗೊಂಡರೆ ಹಲವು ಸವಲತ್ತುಗಳು, ತಿಂಗಳ ಮಾಸಾಶನ ಸೇರಿದಂತೆ ಸೌಲಭ್ಯಗಳಿವೆ. ನಿರಾಕರಿಸಿದರೆ ಜೀವ ಬೆದರಿಕೆ ಒಡ್ಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

Comments