ಗಾಳಿಪಟದ ದಾರದೊಂದಿಗೆ ಮೇಲಕ್ಕೆ ಹಾರಿಹೋದ ವ್ಯಕ್ತಿಯ ವಿಡಿಯೋ ವೈರಲ್

ಶ್ರೀಲಂಕಾದಲ್ಲಿ ಗಾಳಿಪಟ ಹಾರಿಸುವ ವೇಳೆ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಆಗಸದಲ್ಲಿ ಹಾರುತ್ತಿದ್ದ ಗಾಳಿಪಟದೊಂದಿಗೆ ವ್ಯಕ್ತಿಯೊಬ್ಬ ಹಾರಿಹೋಗಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಲವಾದ ಗಾಳಿ ಬೀಸಿದ ಪರಿಣಾಮ ಗಾಳಿಪಟದಂತೆ ಹಗ್ಗ ಹಿಡಿದ ವ್ಯಕ್ತಿಯೂ ಮೇಲಕ್ಕೆ ಹಾರಿಹೋಗಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಗಾಳಿಪಟದೊಂದಿಗೆ ಮೇಲಕ್ಕೆ ಹಾರಿಹೋದ ವ್ಯಕ್ತಿ ಕೆಲ ನಿಮಿಷಗಳ ಕಾಲ ಪರದಾಡಿದ್ದಾನೆ. ಹಗ್ಗ ಹಿಡಿದು ನೇತಾಡುವ ಮೂಲಕ ಅಯ್ಯೋ… ನನ್ನನ್ನು ಕಾಪಾಡಿ… ಕಾಪಾಡಿ ಪ್ಲೀಸ್… ಎಂದು ಗೋಗರೆದಿದ್ದಾನೆ. ಗಾಳಿಪಟ ಹಾರಿಸಲು ಬಂದಿದ್ದ ವ್ಯಕ್ತಿಗಳು ಕೆಳಗಿನಿಂದ ಹಗ್ಗವನ್ನು ಬಿಗಿಯಾಗಿ ಹಿಡಿದುಕೋ ಅಂತಾ ಚೀರಾಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Comments