ಶ್ರಿನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿದ ಕೊಡಗಿನ ವೀರಯೋಧ ಅಲ್ತಾಫ್ ಅಹ್ಮದ್ (37) ಅವರಿಗೆ ಸಕಲ ಸರ್ಕಾರಿ ಮತ್ತು ಸೇನಾ ಗೌರವದೊಂದಿಗೆ ಗೌರವಪೂರ್ಣ ವಿದಾಯ ಸಲ್ಲಿಸಲಾಯಿತು. ಯೋಧನ ಕುಟುಂಬಸ್ಥರು ಮತ್ತು ಅಧಿಕಾರಿಗಳು, ನಿವೃತ್ತ ಯೋಧರು, ಜನಪ್ರತಿನಿಧಿಗಳು, ಸಾರ್ವಜನಿಕರು, ವಿರಾಜಪೇಟೆ ತಾಲೂಕು ಮೈದಾನದಲ್ಲಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ 21 ಸುತ್ತು ಕುಶಾಲತೋಪು ಸಿಡಿಸಿ ಯೋಧ ಅಲ್ತಾಫ್ ಅಹ್ಮದ್‌ಗೆ ಗೌರವ ಸಲ್ಲಿಸಲಾಯಿತು. ಸೇನೆಯ ಡಿಎಸ್‌ಸಿ ವಿಭಾಗದಿಂದ ಗಾರಗಡ್ ಆಫ್ ಹಾನರ್ ಸಲ್ಲಿಸಲಾಯಿತು. ಅಲ್ತಾಫ್ ಕುಟುಂಬಕ್ಕೆ ಸೇನೆಯಿಂದ ತಿರಂಗ ಧ್ವಜ ಹಸ್ತಾಂತರಮಾಡುವ ವೇಳೆ ಯೋಧನ ಪತ್ನಿ ಜುಬೇರಿಯಾ ಕುಸಿದು ಬಿದ್ದ ದೃಶ್ಯ ಮನಕಲುಕುವಂತಿತ್ತು.
ಇನ್ನು ತಂದೆ ಅಲ್ತಾಫ್ ಅಹ್ಮದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಾರತದ ಆರ್ಮಿಯಾ ಸಮವಸ್ತ್ರ ಧರಿಸಬೇಕು ಎಂದು ಹಠಹಿಡಿದ ದೇಶಭಕ್ತನ ಪುಟ್ಟ ಮಕ್ಕಳು ಆರ್ಮಿಯಾ ಸಮವಸ್ತ್ರ ಧರಿಸಿ ಬಂದರು ಅದೆಂಥಹ ದೇಶಭಕ್ತಿ ಅಲ್ತಾಫ್ ಅಹ್ಮದ್ ಅವರ ಮಕ್ಕಳ ದೇಶಭಕ್ತಿಗೆ ತಲೆಬಾಗಿ ಜನ ನಮಸ್ಕರಿಸುತ್ತೀತ್ತು ಕಳೆದ 19 ವರ್ಷಗಳಿಂದ AOCರಿಜಿಮೆಂಟ್ನಲ್ಲಿ ಹವಾಲ್ದಾರ್ ಆಗಿ ಸೇವೆಯಲ್ಲಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ವೀರಯೋಧ ಅಲ್ತಾಫ್ ಅಹ್ಮದ್ ಅವರು ಕರ್ತವ್ಯದಲ್ಲಿದ್ದಾಗ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿದ್ದಾರೆ
Comments
Post a Comment