ಧರ್ಮ ಮನೆಯೊಳಗೆ ಇರಬೇಕು. ಮನೆಯಿಂದ ಹೊರಗೆ ನಡೆಯುವಾಗ ನಾನೊಬ್ಬ ಭಾರತೀಯಳು ಎಂಬುದನ್ನು ನಾವು ಅರಿತುಕೊಳ್ಳಬೇಕು ಸುರಯ್ಯ ಅಂಜುಮ್

ಭಾರತ ಪ್ರತಿಯೊಬ್ಬರಿಗೂ ಧರ್ಮಗಳ ಆಚರಣೆಗೆ ಅವಕಾಶ ನೀಡಿದೆ. ಆದರೆ ಧರ್ಮ ಮನೆಯೊಳಗೆ ಇರಬೇಕು. ಮನೆಯಿಂದ ಹೊರಗೆ ನಡೆಯುವಾಗ ನಾನೊಬ್ಬ ಭಾರತೀಯಳು ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ಶಾಲಾ ಕಾಲೇಜುಗಳಲ್ಲಿನ ಹಿಜಬ್ ವಿವಾದದ ಕುರಿತು ಮಾತನಾಡಿದ ಸುರಯ್ಯ, ಶಿಕ್ಷಣಕ್ಕಿಂತ ಹಿಜಬ್ ಮುಖ್ಯವಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಸುರಯ್ಯ ಅಂಜುಮ್ ಅವರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ .

Comments