ಗಾಯಕಿ ರಾನು ಮೊಂಡಲ್ ರೀತಿ ರಾತ್ರಿ ಬೆಳಗಾಗುವಷ್ಟರಲ್ಲಿ ಕಚ್ಚಾ ಬಾದಾಮ್ ಹಾಡಿನ ಮೂಲಕ ಸದ್ದುಮಾಡಿದ ಗಾಯಕ ಬುಬನ್ ಬಡ್ಯಾಕರ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಬನ್ ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿದ್ದು, ಅದನ್ನು ಕಲಿಯುತ್ತಿರುವಾಗ ಅಪಘಾತಕ್ಕೀಡಾಗಿದ್ದಾರೆ. ಬುಬನ್ ಅವರು ಎದೆಯ ಭಾಗದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಬುಬನ್ ಅವರನ್ನು ಸದ್ಯ ಸುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಬನ್ ಬಡ್ಯಾಕರ್ ಪಶ್ಚಿಮ ಬಂಗಾಳ ಮೂಲದ ಬಿರ್ಭೂಮ್ ಗ್ರಾಮದ ಕಡಲೆಕಾಯಿ ವ್ಯಾಪಾರಿ. ಕಡಲೆಕಾಯಿ ಮಾರಾಟ ಮಾಡುವ ವೇಳೆ ಕಚ್ಚಾ ಬಾದಾಮ್ ಹಾಡನ್ನುಹಾಡಿ ತಾವು ತಂದಿರುವ ಕಡಲೆಕಾಯಿಯನ್ನು ಕೊಳ್ಳುವಂತೆ ಹೇಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರು ಹಾಡು ಕಚ್ಚಾ ಬಾದಾಮ್ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು
ಬುಬನ್ ಅವರ ಹಾಡಿನ ಸಾಲಿಗೆ ರಿಮಿಕ್ಸ್ ಹಾಕಿದ ನಂತರವಂತೂ ಇನ್ಸ್ಟಾಗ್ರಾಮ್ನಲ್ಲಿ ಕಚ್ಚಾ ಬಾದಾಮ್ ಹಾಡಿನ ರೀಲ್ಸ್ಗಳದ್ದೇ ಕಾರುಬಾರಾಗಿತ್ತು. ರಿಮಿಕ್ಸ್ ವಿಡಿಯೋವನ್ನು ಯುಟ್ಯೂಬ್ನಲ್ಲಿ ಹಂಚಿಕೊಂಡ ಮೇಲೆ 50 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದು ನೆಟ್ಟಿಗರ ಮನ ಗೆದ್ದಿತ್ತು.
ಬುಬನ್ ತನ್ನ ಪತ್ನಿ ಮತ್ತು ಮಗನನ್ನು ಕಡಲೆಕಾಯಿ ಮಾರಾಟ ಮಾಡಿ ಸಾಕುತ್ತಿದ್ದರು. ಇವರ ಹಾಡು ವೈರಲ್ ಆಗುತ್ತಿದ್ದಂತೆ ಸ್ಟಾರ್ ನಟ ನಟಿಯರೂ ಕೂಡ ಇವರ ಹಾಡಿಗೆ ರೀಲ್ಸ್ ಮಾಡಿದ್ದು, ಈಗ ಬುಬನ್ ಅವರ ಲುಕ್ ಬದಲಾಗಿದೆ. ಪ್ರತಿದಿನ 3 ರಿಂದ 4 ಕೆಜಿ ಕಡಲೆಕಾಯಿಯನ್ನು ಮಾರಾಟ ಮಾಡಿ 200 ರಿಂದ 250 ರೂ ದುಡಿಯುತ್ತಿದ್ದ ಬುಬನ್ ಅವರೂ ಕೂಡ ದೊಡ್ಡ ಸ್ಟಾರ್ ಆಗಿದ್ದಾರೆ. ಸದ್ಯ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Comments
Post a Comment