ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತಿ ಪತ್ನಿ ಚುಂಬಿಸಿದ್ದನ್ನು ಕಂಡು ಥಳಿಸಿದ ಗುಂಪು : ವೀಡಿಯೊ ವೈರಲ್

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಗೊಂಡ ವಿಡಿಯೋದಲ್ಲಿ ಅಯೋಧ್ಯೆಯ ಸರಯು ನದಿಯಯಲ್ಲಿ ಸ್ನಾನ ಮಾಡುವಾಗ ಪತ್ನಿಯೊಬ್ಬಳು ತನ್ನ ಪತಿಗೆ 'ಮುತ್ತು' ನೀಡುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಯುವಕರ ಗುಂಪು ಒಂದು ತಗಾದೆ ಎತ್ತಿ ಪತಿಯನ್ನು ನೀರಿನಿಂದ ಹೊರ ಎಳೆ ತಂದು ಥಳಿಸಿದ್ದಾರೆ. ಪತಿ ಪತ್ನಿಯ ಈ ಕೃತ್ಯವನ್ನು 'ಅಶ್ಲೀಲ' ಎಂದು ಕರೆದ ಗುಂಪು ''ಅಯೋಧ್ಯೆಯಲ್ಲಿ ಈ ಅಶ್ಲೀಲತೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ .ಈ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ಪರ ವಿರೋಧ ವ್ಯಕ್ತ ವಾಗಿದೆ.

Comments