ರೈಲು ಹಳಿಯಲ್ಲಿ ಸರ್ಕಸ್ ಮಾಡಲು ಹೋದವರ ಪರಿಸ್ಥಿತಿ ಏನಾಗಿದೆ ನೋಡಿ !

ಅವಸರವೇ ಅಪಾಯಕ್ಕೆ ಕಾರಣ ಎಂಬ ಗಾದೆ ಮಾತಿನಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೋ ಒಂದರಲ್ಲಿ, ರೈಲು ಪ್ರಯಾಣಿಕರು ರೈಲು ನಿಲ್ದಾಣ ಬರುವ ಮೊದಲೇ ಸಿಗ್ನಲ್ ಬಳಿ ರೈಲಿನಿಂದ ಇಳಿದು ಹಳಿ ದಾಟಲು ಯತ್ನಿಸುವ ವೇಳೆ ಏಕಾಏಕಿ ರೈಲು ಆಗಮಿಸಿದೆ . ಈ ನಡುವೆ ಒಂದು ಕುಟುಂಬದ ಕೆಲವರು ಸಿಲುಕಿಕೊಂಡಿದ್ದಾರೆ .ಕೆಲವರು ರೈಲ್ವೆ ಹಳಿಯನ್ನು ದಾಟಿದರೆ ಇನ್ನೂ ಕೆಲವರು ಹಿಂದೆ ಬಂದು ನಿಂತಿ ಕೊಂಡಿದ್ದಾರೆ. ಈ ನಡುವೆ ರಭಸವಾಗಿ ರೈಲು ಹಾದು ಹೋಗಿದ್ದು ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ .

ಪ್ರಯಾಣಿಕರ ಈ ನಿರ್ಲಕ್ಷ್ಯತನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ .ಸಂಸದ ಪಿ ಸಿ ಮೋಹನ್ ಕೂಡ ಸಂಬಂಧ ವಿಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು ರೈಲ್ವೆ ಹಳಿ ರೈಲಿಗೆ ಬಿಟ್ಟುಕೊಡಿ ಅದನ್ನು ಅನಗತ್ಯವಾಗಿ ದಾಟಬೇಡಿ ಎಂಬ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Comments