ಮಹಾರಾಷ್ಟ್ರ ಅಜಂತ ಗುಹೆಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಪ್ರವಾಸಿಗರಬ್ಬರ ಪೈಕಿ ಯುವಕನೊಬ್ಬ ಭಾನುವಾರ ಸಪ್ತಕುಂದ ಜಲಪಾತದ ಬಳಿ ತೆಗೆದುಕೊಳ್ಳುವ ವೇಳೆ ಸುಮಾರು 70 ಅಡಿ ಆಳದ ಕಲ್ಲುಗಳ ಗುಂಡಿಗೆ ಬಿದ್ದಿದ್ದಾರೆ . ಸುಮಾರು 2000 ಅಡಿಯಷ್ಟು ಆಳವಿರುವ ಈ ಜಲಪಾತದ ಕಂದಕದ ನಡುವೆ ಕಲ್ಲುಗಳನ್ನು ಹಿಡಿದು ತನ್ನ ರಕ್ಷಣೆಗೆ ಯುವಕ ಗೋಗರೆಯುತ್ತಿದ್ದ, ಕೊನೆಗೆ ಸ್ಥಳೀಯ ಜಿಲ್ಲಾಡಳಿತ ಸೇರಿ ಸ್ಥಳೀಯ ಪುರಾ ತತ್ವ ಇಲಾಖೆ ಅಧಿಕಾರಿಗಳು ಯುವಕನ ರಕ್ಷಣೆಗೆ ಧಾವಿಸಿದ್ದಾರೆ.
ರಕ್ಷಣಾ ಕಾರ್ಯ ಆಚರಣೆಯಲ್ಲಿ ಮೊದಲು ಯುವಕನನ್ನು ಪತ್ತೆ ಹಚ್ಚಿ ನಂತರ ಹಗ್ಗ ಇತರ ಸಾಮಾಗ್ರಿಗಳ ಮೂಲಕ ಕಂದಕದಿಂದ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ /ಬದುಕಿ ಬಂದ ಯುವಕನನ್ನು ಗೋಪಾಲ್ ಪುಂಡಲಿಕ್ ಚೌಹಾನ್ ಎಂದು ಗುರುತಿಸಲಾಗಿದೆ . ರಕ್ಷಣಾ ಕಾರ್ಯ ಆಚರಣೆಯ ವಿಡಿಯೋ ಮೈ ಜುಮ್ ನ್ನಾಗಿಸುವಂತಿದೆ ಘಟನೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
Comments
Post a Comment