ಗಾಜಾ ಮೇಲೆ ದಾಳಿ ತೀವ್ರ ಗೊಳಿಸಿದ ಇಸ್ರೇಲ್: ಹಮಾಸ್ ಪ್ರಮುಖ ಸೂತ್ರದಾರರನ್ನು ಮಖಾಡೆ ಮಲಗಿಸಿದ ಇಸ್ರೇಲ್ ಯೋಧರು

ಇಸ್ರೇಲ್ ದಾಳಿಯ ಅಬ್ಬರಕ್ಕೆ ಹಮಾಸ್ ಸಂಘಟನೆಯ ವಾಯುಪಡೆ ಮುಖ್ಯಸ್ಥ ಅಬು ಮುರಾದ್ ಹತ್ಯೆಗೀಡಾಗಿದ್ದಾನೆ ,ಮತ್ತೊಂದು ದಾಳಿಯಲ್ಲಿ ಅಮ್ಮಾಸ್ ಬಂಡುಕೋರ ಅಲಿ ಲ ಖಾದಿ ಸಹ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ತಿಳಿಸಿದೆ . ಇಸ್ರೇಲ್ ವಾಯುಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ಉಗ್ರರ ಹಲವು ಅಡಗು ತಾಣಗಳು ಧ್ವಂಸಗೊಂಡಿದೆ .

ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾಹು ಗಾಜಾ ಪಟ್ಟಿಗೆ ಶನಿವಾರ ಭೇಟಿ ನೀಡಿ ಯೋಧರಿಗೆ ಧೈರ್ಯ ತುಂಬಿ ಮತ್ತೊಂದು ಹಂತದ ಯುದ್ಧಕ್ಕೆ ಸಜ್ಜಾಗುವಂತೆ ಸೂಚಿಸಿದ್ದಾರೆ ಅ ಸದ್ಯ ಇಸ್ರೇಲ್ ತೆಗೆದುಕೊಳ್ಳುತ್ತಿರುವ ಪ್ರತೀಕಾರ ನೋಡುತ್ತಿದ್ದರೆ ಹಮಾಸ್ ಉಗ್ರರ ಕುರುಹು ಇನ್ನು ಮುಂದಿನ ದಿನದಲ್ಲಿ ಕಾಣ ಸಿಗುವುದು ಬಹಳ ಕಷ್ಟ ಎನ್ನಲಾಗುತ್ತಿದೆ.

Comments