ಸಿಸಿ ಟಿವಿ ಬಯಲು ಮಾಡಿತು ಮಗನ ಕರಾಳ ಮುಖವನ್ನ ! ಪೋಲೀಸರ ಬಲೆಗೆ ಬಿದ್ದ ವಕೀಲ

ಪಂಜಾಬ್‌ನ ರೋಪರ್‌ ಪ್ರದೇಶದಲ್ಲಿ ಸ್ವಂತ ಮಗನೊಬ್ಬ ತನ್ನ ತಾಯಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.ವೃತ್ತಿಯಲ್ಲಿ ವಕೀಲನಾಗಿರುವ ಅಂಕುರ್ ವರ್ಮ ಆರೋಪಿಯಾಗಿದ್ದು ಅಂಕುರ್ ವರ್ಮನ ಮಗ ಮನೆಯಲ್ಲಿ ಅಜ್ಜಿ ಮಲಗುವ ಬೆಡ್ ಮೇಲೆ ಯಾರು ಇಲ್ಲದ ವೇಳೆ ನೀರು ಹಾಕಿ ,ಬೆಡ್ ಮೇಲೆ ಅಜ್ಜಿ ಮೂತ್ರ ವಿಸರ್ಜಿಸಿದ್ದಾರೆ ಎಂದು ಕಥೆ ಕಟ್ಟಿ ತನ್ನ ತಂದೆಯನ್ನು ಚು ಬಿಟ್ಟಿದ್ದಾನೆ .ಅಂಕುರ್ ವರ್ಮ ಇದರಿಂದ ಕೋಪಗೊಂಡು ತನ್ನ ಸ್ವಂತ ತಾಯಿ ಮೇಲೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ್ದಾನೆ .ದೀಪಶಿಖ ಎಂಬ ಇನ್ನೋರ್ವ ಮಗಳು ತಾಯಿಯನ್ನು ನೋಡಲು ಬಂದಾಗ ಅನುಮಾನಗೊಂಡು ಸಿಸಿ ಟಿವಿ ಪರಿಶೀಲಿಸಿದ್ದಾರೆ .ಈ ವೇಳೆ ತಂದೆ ಮತ್ತು ಮಗನ ಕರಾಳ ಮುಖ ಹೊರ ಬಿದ್ದಿದೆ ,ಘಟನೆ ಸಂಬಂಧಿಸಿ ದೀಪಶಿಖ ಪ್ರಕರಣ ದಾಖಲಿಸಿ ಅಂಕುರ್ ವರ್ಮನನ್ನು ಜೈಲಿಗೆ ಅಟ್ಟಿದ್ದಾರೆ.ಘಟನೆ ಸಂಬಂಧಿಸಿ ಸಿಸಿಟಿವಿ ಫೂಟೇಜ್ ನೋಡಿ

Comments