ಜೈ ಶ್ರೀ ರಾಮ್ ,ಮೋದಿ ಮೋದಿ ಘೋಷಣೆಗೆ ತಾಳ್ಮೆ ಕಳೆದುಕೊಂಡ ರಾಹುಲ್ ಗಾಂಧಿ ವಿಡಿಯೋ

ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸಾಮಾಜಿಕ ಜಾಲ ತಾಣ x ನಲ್ಲಿ ಪ್ರಕಟಿಸಿದ ವಿಡಿಯೋ ದಲ್ಲಿ ಜೈ ಶ್ರೀ ರಾಮ್ ,ಮೋದಿ ಮೋದಿ ಘೋಷಣೆಗೆ ಕಾಂಗ್ರೆಸ್ ನಾಯಕ ತಾಳ್ಮೆ ಕಳೆದುಕೊಂಡಿದ್ದಾರೆ .ಕಾಂಗ್ರೆಸ್ ಪಕ್ಷವು ಅಯೋಧ್ಯೆಯಲ್ಲಿನ ಪ್ರಾಣ ಪ್ರತಿಷ್ಠಾ (ಪ್ರತಿಷ್ಠಾಪನಾ ಸಮಾರಂಭ) ಆಹ್ವಾನವನ್ನು ನಿರಾಕರಿಸಿದ ನಂತರ ಭಾರತದ ಜನರನ್ನು ಹೇಗೆ ಎದುರಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ .

ಅಸ್ಸಾಂನಲ್ಲಿ ರಾಹುಲ್ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ವೇಳೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ವರದಿ ಮಾಡಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ .

Comments