ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆ ಇತ್ತ ಕಮಲ ಮತ್ತು ಕೈ ಪಾಳಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ . ಪ್ರಮುಖ ಆಕಾಂಕ್ಷಿಗಳು ಈಗಾಗಲೇ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸುತ್ತಾಟ ಮುಂದುವರೆಸಿ ಸಕ್ರಿಯ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ .
ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಪಾಳಯದಲ್ಲಿ ಈ ಬಾರಿ ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರು ಮತ್ತೊಮ್ಮೆ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸುತಿದ್ದರೆ ,ಇತ್ತ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಹ ಸ್ಪರ್ಧೆಯ ರೇಸ್ ನಲ್ಲಿ ಮುಂದಿದ್ದಾರೆ .ಈ ಪೈಕಿ ಜಯಪ್ರಕಾಶ್ ಹೆಗಡೆ ಅವರು ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.ಮಾಜಿ ಸಚಿವ ಕಾಂಗ್ರೆಸ್ಸ್ ನಾಯಕ ವಿನಯ ಕುಮಾರ್ ಸೊರಕೆ ಅವರು ಕೂಡ ಲೋಕ ಸಭಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು ,ದಕ್ಷಿಣ ಕನ್ನಡ ಅಥವಾ ಉಡುಪಿ ಚಿಕ್ಕಮಂಗಳೂರು ಎರಡು ಕ್ಷೇತ್ರದಲ್ಲಿ ಇವರ ಹೆಸರು ಕೇಳಿ ಬರುತಿದೆ .ಡಾ ಕೆ ಪಿ ಅಂಶುಮಂತ್, ಸುಧೀರ್‌ಕುಮಾರ್ ಮೂರಳ್ಳಿ, ಆರತಿ ಕೃಷ್ಣ ಸಹ ಕಾಂಗ್ರೆಸ್ ಟಿಕೆಟ್ ರೇಸ್‌ನಲ್ಲಿದ್ದಾರೆ.
ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕಾಂಗ್ರೆಸ್ ನ ಬಹುತೇಕ ತಳಮಟ್ಟ ಕಾರ್ಯಕರ್ತರು ಹೊಸ ಅಭ್ಯರ್ಥಿಗಳ ಪರ ಒಲವು ತೋರುತ್ತಿದ್ದು ,ಸ್ಥಳೀಯರಿಗೆ ಹೆಚ್ಚಿನ ಪ್ರಾಶಸ್ಯ ನೀಡಬೇಕು ,ಸಕ್ರಿಯ ರಾಜಕೀಯದಲ್ಲಿ ಗುರುತಿಸಿಕೊಂಡು ಕಾರ್ಯಕರ್ತರಿಗೆ ಸ್ಪಂದಿಸುವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರ ಆಗ್ರಹವಾಗಿದೆ.
ಚಿಕ್ಕಮಂಗಳೂರಿನವರಿಗೆ ಟಿಕೆಟ್ ನೀಡಿ ಎಂಬ ಆಗ್ರಹ
1952ರಲ್ಲಿ ಲೋಕಸಭೆ ಕ್ಷೇತ್ರ ರಚನೆಯಾಗಿ 2009ರ ಚುನಾವಣೆಯವರೆಗೂ ಅಸ್ತಿತ್ವದಲ್ಲಿದ್ದ ಚಿಕ್ಕಮಗಳೂರು ಕ್ಷೇತ್ರ ಬಳಿಕ ಉಡುಪಿ - ಚಿಕ್ಕಮಗಳೂರು ಕ್ಷೇತ್ರವಾಗಿ ಬದಲಾವಣೆಯಾಯಿತು. ಆ ಬಳಿಕ ಚಿಕ್ಕಮಗಳೂರು ಜಿಲ್ಲೆಯವರಿಗೆ ಸ್ಪರ್ಧಿಸಲು ಅವಕಾಶವೇ ಸಿಕ್ಕಿಲ್ಲ, ಉಡುಪಿ ಜಿಲ್ಲೆಯವರಿಗೆ ಮಣೆ ಹಾಕುತ್ತ ಬಂದಿರುವುದು ಕಾಫಿನಾಡಿಗೆ ನಿರಾಸೆ ತರಿಸಿದೆ.ಈ ಬಾರಿ ಚಿಕ್ಕಮಂಗಳೂರಿನವರಿಗೆ ಟಿಕೆಟ್ ನೀಡಿ ಎಂಬದು ಎರಡು ಪಕ್ಷದ ಕಾರ್ಯಕರ್ತರ ಆಗ್ರಹವಾಗಿದೆ.
Comments
Post a Comment